ಹೈಡ್ ಅಂಡ್ ಸೀಕ್ ಕಳ್ಳ ಪೋಲೀಸ್ ಆಟದಲ್ಲಿ ಗೆದ್ದೋರ್ಯಾರು? --ರೇಟಿಂಗ್: 3/5 ***
Posted date: 16 Sat, Mar 2024 09:28:53 AM
 ಆಗಾಗ ನಡೆಯುವ  ಶ್ರೀಮಂತರ ಮಕ್ಕಳ ಅಪಹರಣ ಪ್ರಕರಣದ ಹಿಂದೆ ಬರೀ ಹಣ ಬೇಡಿಕೆಯ ಉದ್ದೇಶ ಮಾತ್ರವಲ್ಲದೆ ಏನೇನೆಲ್ಲಾ ಇರುತ್ತದೆ, ಹಣಕ್ಕಾಗಿ ಸ್ವಂತ ಮಕ್ಕಳನ್ನೇ ಪಣಕ್ಕಿಡುವಂಥ ತಂದೆಯರೂ ಇರುತ್ರಾರೆ ಎಂಬುದನ್ನು ಹೈಡ್ ಅಂಡ್ ಸೀಕ್ ಚಿತ್ರದಲ್ಲಿ ಹೇಳಲಾಗಿದೆ.

ಇಲ್ಲಿ ವ್ಯವಸ್ಥಿತ ಕಿಡ್ನಾಪಿಂಗ್ ಪ್ರೊಸೆಸ್ ನಡೆಯುತ್ತದೆ. ಅದನ್ನು ಒಂದು ಆರ್ಗನೈಜೇಶನ್‌ ನಡೆಸುತ್ತದೆ, ಅದರ ಹಿಂದೆ ಯರ‍್ಯಾರಿದ್ದು ಕೆಲಸ ಮಾಡುತ್ತಿರುತ್ತಾರೆ, ಹಣದ ಮುಂದೆ ಪ್ರೀತಿ, ಮಾನವೀಯತೆ ಹೇಗೆ ಮಂಕಾಗುತ್ತದೆ ಇದನ್ನೆಲ್ಲ. 
 
ಹೈಡ್ ಅಂಡ್ ಸೀಕ್ ಚಿತ್ರದಲ್ಲಿ  ನಿರ್ದೇಶಕ  ಪುನೀತ್ ನಾಗರಾಜು ಅವರು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಶ್ರೀಮಂತ ಉದ್ಯಮಿಗಳ ಕುಟುಂಬದ ಸಹೋದರಿಯರಿಬ್ಬರನ್ನು ಈ ಒಂದು ಆರ್ಗನೈಜೇಶನ್ ಕಿಡ್ನಾಪ್ ಮಾಡುತ್ತದೆ, ನಂತರ ಅವರನ್ನು ಅಪಹರಿಸಲು  ಡೀಲ್ ಕೊಟ್ಟವರು ಹೇಳಿದ ಸ್ಥಳಕ್ಕೆ ಈ ಯುವತಿಯರನ್ನು  ತಲುಪಿಸುವುದು ಈ ತಂಡದ ಕೆಲಸವಾಗಿರುತ್ತೆ, ಇದರ ನೇತೃತ್ವ ವಹಿಸಿಕೊಂಡ ನಾಯಕ ಅನೂಪ್ ರೇವಣ್ಣ ಹಾಗೂ ಆತನ ಸಹಾಯಕ ಮೈತ್ರಿ ಜಗ್ಗಿ ಹೇಗೆ ಆ ಕೆಲಸವನ್ನು ನಿಭಾಯಿಸಿದರು, ಆ ಒಂದು ಪ್ರೊಸೆಸ್ ಹೇಗೆಲ್ಲ ನಡೆಯಿತು ಎಂಬುದನ್ನು  ಕುತೂಹಲಕರ ತಿರುವುಗಳೊಂದಿಗೆ ನಿರೂಪಿಸಿರುವ ನಿರ್ದೇಶಕರ ಐಡಿಯಾ ಮೆಚುವಂಥಾದ್ದು, ಹಾಗೆ ನೋಡಿದರೆ ಹೈಡ್ ಅಂಡ್ ಸೀಕ್ ಒಂದು  ಕಳ್ಳ ಪೋಲೀಸ್ ಆಟದ ಕಥೆ ಎನ್ನಬಹುದು, ಇದರ ನಡುವೆ ತನ್ನನ್ನು ಕಿಡ್ನಾಪ್ ಮಾಡಿದ ನಾಯಕನನ್ನೇ ಆತನ ಉತ್ತಮ ನಡವಳಿಕೆ ಕಂಡು ಪ್ರೀತಿಸುವ ಹಾಸಿನಿ(ಧನ್ಯಾ ರಾಮ್‌ಕುಮಾರ್)ಯ ಚಿಕ್ಕ ಪ್ರೇಮಕಥೆಯೂ ಜೊತೆಜೊತೆಗೇ ಸಾಗುತ್ತದೆ. ಕಂಪನಿಯ ಶೇರು ಹಣಕ್ಕಾಗಿ  ಏನೆಲ್ಲ ತಂತ್ರ ಕುತಂತ್ರಗಳು ನಡೆಯುತ್ತವೆ ಎಂಬುದನ್ನು  ಚಿತ್ರದಲ್ಲಿ  ಹೇಲಾಗಿದೆ.
 
ಇಬ್ಬರು ಬ್ಯುಸಿನೆಸ್ ಮ್ಯಾನ್‌ಗಳಾದ ರಾಜೇಶ್ ನಟರಂಗ, ಕೃಷ್ಣ ಹೆಬ್ಬಾಳೆ ಆಡುವ ಮಕ್ಕಳ ಕಿಡ್ನಾಪ್ ನಾಟಕ, ಮುಂದೆ ಅದು ಹೇಗೆ ನಿಜವಾಗಿಯೂ ತಮ್ಮ ಮಕ್ಕಳನ್ನು ಕಿಡ್ನಾಪ್ ಆಗುವಂತೆ ಮಾಡಿತು, ಅದರ ಪರಿಣಾಮ ಏನಾಯಿತು ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಹೋಗಲೇಬೇಕು. ಕಿಡ್ನಾಪರ್ ಆಗಿ ಅನೂಪ್ ರೇವಣ್ಣ ನಾಯಕ, ಖಳನಾಯಕ ಎರಡೂ ಆಗಿ ನಿಜಕ್ಕೂ ಉತ್ತಮ ಅಭಿನಯವನ್ನೇ ನೀಡಿದ್ದಾರೆ, ಅವರು ಈ ಹಿಂದೆ ಮಾಡಿದ ಪಾತ್ರಗಳಿಗೂ ಈ ಚಿತ್ರದ ಪಾತ್ರಕ್ಕೂ ತುಂಬಾ ವ್ಯತ್ಯಾಸವಿದೆ. ಜಾಸ್ತಿ ಮಾತಾಡದ ಯಾವುದನ್ನೂ ಎಕ್ಸ್ಪ್ರೆಷನ್ ಮಾಡದಂಥ ವ್ಯಕ್ತಿಯಾಗಿ ಅವರಿಲ್ಲಿ ಕಾಣಿಸಿಕೊಂಡಿದ್ದಾರೆ.  ಆದರೂ ಮುಖದಲ್ಲಿ ಇನ್ನೂ ಸ್ವಲ್ಪ ಎಕ್ಸ್ಪ್ರೆಷನ್ ಬೇಕಿತ್ತು ಅನಿಸದಿರದು. ಇನ್ನು ನಾಯಕಿ ಹಾಸಿನಿ ಪಾತ್ರದಲ್ಲಿ ಧನ್ಯಾ ರಾಮ್‌ಕುಮಾರ್ ಸಿಕ್ಕ ಅವಕಾಶದಲ್ಲಿ ಉತ್ತಮ ಅಭುನಯ ನೀಡಿದ್ದಾರೆ. ನಿರ್ದೇಶಕರು  ರಿವರ್ಸ್ ಸ್ಕ್ರೀನ್ ಪ್ಲೈ ಮೂಲಕ ಕಥೆ ಹೇಳಿರುವುದು ಚಿತ್ರದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ತುಂಬಾ ಟ್ವಿಸ್ಟ್ ಅಂಡ್ ಟರ್ನ್ ಇರುವ ಹೈಡ್ ಅಂಡ್ ಸೀಕ್ ಚಿತ್ರದ ಟೈಟಲ್ಲೇ ಹೇಳುವಂತೆ ಇಡೀ ಚಿತ್ರದ ಕಥೆ ನಿಂತಿರುವುದು ಒಂದು ಕಿಡ್ನಾಪ್ ಪ್ರಕರಣದ ಸುತ್ತ. ಈ ಕಿಡ್ನಾಪಿಂಗ್ ಆರ್ಗನೈಜೇಶನ್‌ನ ಕಿಂಗ ಪಿನ್ ಯಾರು ಎನ್ನುವುದೇ  ಚಿತ್ರದ ಕ್ಲೈಮ್ಯಾಕ್ಸ್. ಇದು ಚಿತ್ರದಲ್ಲಿರುವ ಯಾರೂ ಸಹ ನಿರೀಕ್ಷಿಸಿರದ ದೊಡ್ಡ ಟ್ವಿಸ್ಟ್ ಕೂಡ. ಈ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರದ ಪ್ರಥಮಾರ್ಧ  ಡೈರೆಕ್ಟರ್ ಪಾಯಿಂಟ್ ಆಫ್ ವ್ಯೂನಲ್ಲಿ ನಡೆಯುತ್ತದೆ. ಸೆಕೆಂಡ್ ಹಾಫ್ ನಲ್ಲಿ ಅದೇಸೀನ್ ಬೇರೆ ರೀತಿ ನಡೆಯುತ್ತದೆ, ನಾಯಕ ಯುವತಿಯರನ್ನು ಕಿಡ್ನಾಪ್ ಮಾಡಲು ಕಾರಣವೇನು, ಅದರ ಪರಿಣಾಮವೇನಾಯಿತು ಎನ್ನುವುದೇ ಚಿತ್ರದ ಕಾನ್ಸೆಪ್ಟ್. ಇನ್ನು ಮೈತ್ರಿ ಜಗ್ಗಿ, ರಕ್ಷಾ ಉಮೇಶ್ (ಡಾ ಶಿವರಾಜಕುಮಾರ್ ಬೆಳಗಿನ ವಾಕಿಂಗ್ ಗೆಳೆಯ ಉಮೇಶಗೌಡರ ಮಗಳು)  ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ, ರಿಜೋ ಪಿ. ಜಾನ್ ಅವರ ಕ್ಯಾಮೆರಾ ವರ್ಕ್, ಸ್ಯಾಂಡಿ ಅದ್ದಾನ್ಕಿ  ಅವರ ಸಂಗೀತ  ಚಿತ್ರಕ್ಕೆ ಮೆರಗು ನೀಡಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed